Kannada Kavana From Ravi
By Ravi N
ಹುಣ್ಣಿಮೆ ಚಂದ್ರನ ನಾಚಿಸುವ ಮನದರಸಿಯ ನಗು
ನಕ್ಷತ್ರ ಪುಂಜಕೂ ಮಿಗಿಲಾದ ನನ್ನಾಕೆಯ ಸೊಬಗು
ನಗುತಿರಲು ನೀನೆಷ್ಟು ಸುಂದರ ಸಾಂಗತ್ಯ ಮೆರುಗು
ನನ್ನವಳಾಗುವೆ ನೀನೆಂಬ ಬಿಗುಮಾನ ಮಾಸದ ಸೊಬಗು
ನೀ ನಕ್ಕರೆ ಭಾಗ್ಯದ ಒಡಲ ಮಿನುಗು
ನೀ ಸಿಕ್ಕರೆ ನನ್ನ ಬಾಳ ಪುಟಕೆ ಮೆರುಗು
ನೀ ಸಿಕ್ಕರೂ ಸಿಗದಿದ್ದರೂ ನೀ ನನ್ನ ಒಲವು
ನೀನೆಂದರೆ ಬಾಳ ಸಂಗಾತಿ ಸೋಜುಗದ ಸರಸಗಾತಿ
ಬಾಳಿನೊಲುಮೆಯ ಬವಣೆ ನೀಗಲು
ಬೆರೆತು ಬಾಳಲು ಬಯಸಿಹೆ ನಿನ್ನ ಸಮ್ಮತಿ
ಹೇಳಿಬಿಡು ನನ್ನೊಲವೆ ನಿನ್ನೊಲುಮೆ ನನಗೆಂದು
ನಾ ಕಾಯುವೆ ನಿನ್ನ ನೆರಳಾಗಿ ಎಂದೆಂದೂ…
By Ravi N

Comments