top of page

IMAM MATHU ELUBINA ANGADI - By PRAKASH PUTTAPPA

Aug 16
2 min read

Updated: 2 days ago

Written By: PRAKASH PUTTAPPA

Category: POETRY

Competition: Poetry and Creative Writing Competition 2026

In the evocative poem "IMAM MATHU ELUBINA ANGADI," Prakash Puttappa delves into a haunting narrative that resonates with cultural and historical reflections. Submitted for the Poetry and Creative Writing Competition 2026, this work stands as a testament to Puttappa's ability to weave complex themes into his poetry. The competition serves as a vibrant stage for showcasing diverse voices in literature, and Puttappa's contribution adds to its rich tapestry.

About the Work

Puttappa's "IMAM MATHU ELUBINA ANGADI" explores the themes of mortality, equality, and commerce, wrapped in a vivid and unsettling imagery. The poem uses the motif of bones as a universal equalizer, challenging social hierarchies and historical narratives. With a tone that is both contemplative and critical, Puttappa invites the reader to reflect on the transient nature of power and identity.

IMAM MATHU ELUBINA ANGADI

Original Submission by PRAKASH PUTTAPPA


ಎಲುಬಿನ ಅಂಗಡಿ ಮತ್ತು ಇಮಾಮ್


ತಕ್ಕಡಿಯಲ್ಲಿ ಮೂಳೆಯನ್ನಿಟ್ಟು

ವ್ಯಾಪಾರಕ್ಕೆ ಅಣಿಯಾಗುತ್ತಾನೆ ಇಮಾಮ್


ರಾಣಿಯದ್ದೋ ರಾಜನದ್ದೋ ಪೂಜಾರಿಯದ್ದೋ

ಪಾದ್ರಿಯದ್ದೋ ಮುಲ್ಲಾನದ್ದೋ

ಗೇಟ್ ಕೀಪರಿನದ್ದೋ

ಸತ್ತ ಕಳೇಬರದ ಎಲುಬು ಕದ್ದು

ಗುಲ್ ಮೊಹರಿನ ರಸ್ತೆಯಲ್ಲಿ

ಅಂಗಡಿ ತೆರೆಯುತ್ತಾನೆ


ಇಲ್ಲಿ ರಕ್ತ ಸೋರುವ

ಬಲೂಚಿಗಳೋ ಗಾಂಜಾ ಗಿರಾಕಿಗಳೋ

ಇಸ್ರೇಲಿ ಬಿಳಿ ಬುರುಡೆಗಳೋ

ರಷ್ಯನ್ ರಜಾಯಿಗಳೋ ಉಕ್ರೇನಿನ

ವರ್ಧಮಾನರೋ

ಯಾರದಾದರೇನು?

ಹೂತ ಶವಗಳ ಎಲುಬಿನ ರುಚಿ

ಬಚ್ಚಲು ಬಾಚುವ ನಾಯಿಗಳಿಗೆ

ರುಚಿ ಹತ್ತಿದ ಮೇಲೆ


ಅವನ್ಯಾರೋ ಹರಪ್ಪನ ಕಾಲದಲ್ಲಿ

ಮೀಸೆ ಹೊತ್ತಿದ್ದವನಂತೆ

ಅವಳ್ಯಾರೋ ಮೊಹೆಂಜೋದಾರದ ಸ್ನಾನಘಟ್ಟದಲ್ಲಿ

ಮೀಯ್ದು ಶೃಂಗಾರಗೊಂಡವಳಂತೆ

ಇನ್ನು ಅವರು

ಈಜಿಟ್ಟಿನ ರಾಣಿಯ ಶಯನಕೋಣೆ ಹೊಕ್ಕು

ಇತಿಹಾಸ ಬರೆದವರಂತೆ

ಇವರು

ರೋಮ್ ಹೊತ್ತಿ ಉರಿಯುವಾಗ ದೊರೆಯ

ಆಸ್ಥಾನಿಕರಾಗಿ ಅವರಿಗೆ ಚಾಮರ ಬೀಸಿದವರಂತೆ

ಯಾರದಾದರೇನು ಅಂಗಡಿಯಲಿ ಕೂತ ಇಮಾಮಿನ

ತಕ್ಕಡಿ ತೂಗಿದಾಗ ಎಲ್ಲದಕ್ಕೂ ಒಂದೇ ಬೆಲೆ


ಪ್ಯಾರೀಸಿನ ಉದ್ಧ ಗೋಪುರದ ಮೇಲೆ

ಅಥೆನ್ಸಿನ ಮುದಿ ಪಾರಿವಾಳವೊಂದು

ಅಪಶಕುನ ನುಡಿದಿದೆ

ಮುಂದೊಂದು ಮಹಾಯುದ್ಧದಲಿ

ಅರೇಬಿಯನ್ ದೊರೆಯೊಬ್ಬನ ಸಾಮ್ರಾಜ್ಯದ ಮೇಲೆ

ಚೇಳು ತಿನ್ನುವ ರಾಜನ ಸೈನ್ಯದ ಆಕ್ರಮಣವಾಗಿ

ಬಿದ್ದ ಮೂಳೆಯ ಪಳೆಯುಳಿಕೆ ಆಯುವ

ಅಮೇರಿಕಾದ ಚಿಂದಿ ಆಯುವ ಹುಡುಗ

ಇಮಾಮಿನ ಅಂಗಡಿಯಲಿ ಮೂಳೆಗಳ ಚೌಕಾಸಿಗೆ

ನಿಂತಾಗ

ನವಿಲುಗಳು ಕಾಳಿಗಾಗಿ ಅಲೆಯುತ್ತವೆ


ಇಲ್ಲಿ ಯಾವ ಮೂಳೆ ಯಾವ ಜಾತಿಯದ್ದೋ

ಯಾವುದು ಕಪ್ಪೋ ಯಾವುದು ಬಿಳಿಯೋ

ಯಾವುದು ಬಲಿಷ್ಟವೋ ಯಾವುದು ಬಲಹೀನವೋ

ಯಾವುದು ಅಂಗಿನ ಅರಮನೆಯದ್ದೋ

ಯಾವುದು ವಿಂಗಡದ ಗುಡಿಸಲದ್ದೋ

ಒಂದೇ ತೂಕ ಒಂದೇ ಬೆಲೆ

ತೂಗುವ ತಕ್ಕಡಿಯ ಬೊಟ್ಟಿನ ಮೇಲೆ


ನಾಳೆ ಕೆರೆಬಿಯನೊಬ್ಬ ಹೋರಾಡಬಹುದು

ತಾಲಿಬಾನಿನವನೊಬ್ಬ ತಲೆ ಹೊಡೆದು ಕೇಳಬಹುದು

ಸಿಕ್ಕ ಎಲುಬುಗಳು ತಮ್ಮ ಧರ್ಮದ ಕುರುಹಿದೆಯೆಂದು

ಸಾಮ್ರಾಜ್ಯ ತಮ್ಮ ಸುಪರ್ದಿಗೆ ಸೇರಲು

ಎಲುಬಿನ ಸಾಕ್ಷಿಗಿದೆಯೆಂದು

ಬ್ರಿಟನ್ನಿನ ರಾಣಿಯೊಬ್ಬಳ ಚಿತೆಯೊಳಗಿನ

ಎಲುಬು ಕದ್ದವನೊಬ್ಬ ಬೆಲೆ ಬಾಳುವ ಬಾಚಣಿಗೆ ಮಾಡಿಸಿ

ತನ್ನ ಕಟಿಂಗ್ ಶಾಪಿನಲಿ

ಬಾಡಿಗೆಗೆ ತಲೆಬಾಚುವನಂತೆ

ಸಾಲುಗಟ್ಟಿದ್ದಾರೆ ಬಿಳಿ ಚರ್ಮದ ಕುಬೇರರು

ಅವರು

ಮಹಾನ್ ಸಂಗೀತಗಾರನೋ

ಫುಟ್ಬಾಲಿನ ಆಟಗಾರನೋ ರಗ್ಬಿ ಚಾಂಪಿಯನ್ನೋ

ವೈಟ್ ಹೌಸಿನ ದೊರೆಯೋ ಸೆನೆಟಿನ ಸಾಮ್ರಾಜ್ಞಿಯೋ

ಎಲ್ಲರೂ ಈಗ ಎಲುಬಿನಂಗಡಿಯ

ಸರಕುಗಳೇ


ಇಲ್ಲಿ ಯಾರೂ ಕೇಳುವುದಿಲ್ಲ

ಇವು ಕರಿಯರದ್ದೋ ಬಿಳಿಯರದ್ದೋ

ರಕ್ತ ಮೆಲ್ಲುವವರದ್ದೋ

ಭೀಭತ್ಸ ಕುಡಿಯವವರದ್ದೋ

ಬೂಟು ಕಾಲಿನವರದ್ದೋ ಬಾಟಾ ಚಪ್ಪಲಿಯವರದ್ದೋ


ಒಟ್ಟಿನಲ್ಲಿ

ಬಿಕರಿಗಿಟ್ಟ ಎಲುಬಿಗೆ ನಾಯಿಗಳು ಕಾಯುತ್ತಾ

ಕೂರುವುದು ಹೊಸದೇನಲ್ಲ

ಮೂಳೆ ಮಾರುವುದನು ನಿಷೇಧಿಸಲಾಗಿದೆ

ಎನ್ನುತ್ತಾ ಚರ್ಚಿನ ಮೈಕಿನಲಿ ಕೂಗುವಾಗ

ಬಿಕರಿಗಿಟ್ಟ ಎಲ್ಲಾ ಮೂಳೆಗಳನು ಸುಪರ್ದಿಗೆ ಪಡೆಯಲು

ಕೆಂಪಂಗಿಯ ಕಾಲಾಳುಗಳು ಪರೇಡ್ ನಡೆಸುವಾಗ

ಚಾಂಗ್ ಪೂ ಸಾಮ್ರಾಜ್ಯದ ದೊರೆಯ ಸೈನ್ಯ

ಕೆಂಪು ಬಾವುಟ ಹಾರಿಸುತ್ತಾ ಪಿರಂಗಿ ಸದ್ದಾಗಿಸುವಾಗ

ಕಬ್ಬಿಣದ ಪೆಟ್ಟಿಗೆಯಲಿ ಮೂಳೆಗಳ ಭದ್ರವಾಗಿಸಿ

ಕೀಲಿಯನ್ನು ತನ್ನ ಉಡದಾರದಲ್ಲಿ

ಭದ್ರವಾಗಿಸುತ್ತಾನೆ ಇಮಾಮ್

About the Competition

The Poetry and Creative Writing Competition 2026 by Hashtag Kalakar is a prestigious platform celebrating originality and creativity in literature. It invites writers and poets from around the world to share their unique voices and perspectives. With a focus on nurturing talent and fostering a global literary community, the competition promises a diverse collection of thought-provoking works.

Thank you, Prakash Puttappa, for your compelling submission "IMAM MATHU ELUBINA ANGADI" to the Poetry and Creative Writing Competition 2026. Your work enriches the competition with its profound themes and striking imagery. We appreciate your participation and look forward to seeing more of your creative endeavors.

About Hashtag Kalakar

Hashtag Kalakar is a creative platform dedicated to providing artists, writers, singers and other creative talents with opportunities to showcase their work and reach wider audiences through competitions, features and creative initiatives.

 
 
 

Comments

Rated 0 out of 5 stars.
No ratings yet

Add a rating
bottom of page