Hanigavana ( A Small Verse)
By Shilpa Basappa Basarakod
ತಾಳಿಯೆಂಬ ಮೂರು ಗಂಟು
ಆಗಲಿ ಏಳೇಳು ಜನುಮದ ನಂಟು
ಹೇಳದ ಅದೆಷ್ಟೋ ಮಾತುಗಳು ಅಡಗಿವೆ ಮನದಲಿ ಕಾಣೆಯಾಗಿ
ಹೇಗೆ ತಿಳಿಸಲಿ ನೀ ಹೀಗೆ ದೂರ ಹೊರಟರೆ ಮೌನಿಯಾಗಿ
ಬದುಕೆಂಬ ಜಟಕಾ ಬಂಡಿಯಲಿ ದಾರಿಯುದ್ದಕ್ಕೂ ಸಿಗುವರು ಅದೆಷ್ಟೋ ಸವಾರರು
ಚಲಿಸಿ ಬಂದ ಹಾದಿಯ ಮೆಲುಕು ಹಾಕುವಂತೆ ನೆನಪು ಉಳಿಸುವವರು ಮಾತ್ರ ಕೆಲವರು
ಹೆಣ್ಣು ಹೊನ್ನು ಮಣ್ಣಿಗಾಗಿ ಮಾಡುವೆ ಯಾಕಿಷ್ಟು ವ್ಯಥೆ
ಕೇಳಿಲ್ಲವಾ? ನೀ ಒಂದು ಮುತ್ತಿನ ಕಥೆ
ಕಾಯಲೆಂದೇ ಮೇಲೊಬ್ಬ ಕುಳಿತಿರುವಾಗ ಕರ್ತ
ಫಲಿಸದು ನೀ ಏನೇ ಹೂಡಿದರು ತರ್ಕ
By Shilpa Basappa Basarakod

Comments