By Shilpa Basappa Basarakod
ಹೂ ಹಣ್ಣು ಹಿಡಿದು ಬರಾವ ನನ್ನ ಮಾವ ಪ್ರತಿ ಮಾಸ
ಚೈತ್ರ ಕಳೆದರೂ ಬರಲಿಲ್ಲ ಅಂದ್ರೆ ಅಗಲ್ಲೇನು ನನ್ನ ಜೀವಕ ತ್ರಾಸ
ದಣಿದು ಬಂದಾನೇನೂ ಎಂದು ಮಾಡಿ ಇಟ್ಟಿನಿ ತಣ್ಣಗೆ ನಿಂಬೆಹಣ್ಣಿನ ಜೂಸ
ನೀ ಹಿಂಗ ಮಾಡಿದ್ರೆ ಮಾಡುದು ಯಾವಾಗ ನಾವೊಂದು ಕೂಸ
ಅವನೊಂದು ತುದಿ ಮೂಗ ಅರಗಿಣಿ
ದಂತ ಪೋಣಿಸಿ ಹೆಣೆದ ಮೆಕ್ಕೆ ತೆನಿ
ಶಿವನ ಹಾಂಗ ಕೊರಳಾಗ ಹಾಕ್ಯಾನ ರುದ್ರಾಕ್ಷಿ ಮಣಿ
ಮೈ ಬಣ್ಣ ಎಂದೂ ಮಾಸದ ಹಾಲಿನ ಕೆನಿ
ತೆಲ್ಯಾಗ ಇಟ್ಟಾನ ಮೆದುಳು ಭಾರೀ ಶ್ಯಾಣಿ
ಎಲ್ಲರೂ ಅಂತಾರ ಅವನೊಂದು ಮುಟ್ಟಿದರೆ ಮುನಿ
ಆದರೆ ಮನಸ್ಸು ಮಾತ್ರ ಬಲು ತಿಳಿ ಬೆಣ್ಣಿ
ಪದ ಪುಟ ಸಾಲ್ತಿಲ್ಲ ಮಾಡೆನಂದ್ರ ಇನ್ನ ವರ್ಣನಿ
By Shilpa Basappa Basarakod
Comments