Hanigavana (A Small Verse)
- Hashtag Kalakar
- May 11, 2023
- 1 min read
By Shilpa Basappa Basarakod
ಮನದಲ್ಲೊಂದು ಚಿಗುರೊಡೆದಿದೆ ಪ್ರೀತಿ
ನಿಯಂತ್ರಣಕ್ಕೆ ಸಿಗುತ್ತಿಲ್ಲ ನಿನ್ನ ನೆನಪಿನ ಭ್ರಾಂತಿ
ಅಪ್ಪಣೆ ಕೋರಿ ಮನ ತಾಳಿದ ಶಾಂತಿ
ಕಾಲ ಮೀರಿದರೂ ನಾ ಮಾಡೆನು ಕ್ರಾಂತಿ
ನಿನಗೂ ಒಲವಾಗಿದೆಯೆಂದು ಕೊಟ್ಟು ಬಿಡು ಒಂದು ಸಣ್ಣ ಸುಳಿವು
ಕಾಯುವೆ ನಿನ್ನ ಜೋಪಾನವಾಗಿ ಎಂದೂ ಆಗದಂತೆ ಕಳಿವು
ನನಗೂ ಗೊತ್ತು ನೀನೆಂದೂ ಬಾರೇನು ನನ್ನ ಬಳಿವು
ಆದರೂ ಮನಸು ಒಪ್ಪುತ್ತಿಲ್ಲ ನಿನ್ನ ಮರೆವು
ಮನದ ಬಯಕೆ ನೀನೇ ಆಗಿರುವಾಗ ನವಿ
ರುಚಿಗೆ ಸಿಗುತ್ತಿಲ್ಲ ಏನೇ ತಿಂದರೂ ಸಿಹಿ
ನಿನ್ನ ನೋಡುತ ನೋಡುತ ನಾನಗಿರುವೆ ಕವಿ
ನಿನ್ನೊಂದಿಗಿನ ಮಾತು ಬೇಡ ಮಾಡಿದೆ ನಾಳೆ ಉದಯಿಸುವುದು ರವಿ
By Shilpa Basappa Basarakod

Comments