Deevige
By Dr.Pooja S C
ಕಲಿಯಬೇಕೆಂಬ ಆಸೆಯಿದೆ ಪ್ರೋತ್ಸಾಹವಿಲ್ಲ
ಸಾಧಿಸಬೇಕೆಂಬ ಛಲವಿದೆ ಸಾಧನವಿಲ್ಲ
ನನ್ನ ಪ್ರಾರ್ಥನೆ ಆಲಿಸುವವರಿಲ್ಲ
ನನ್ನ ಹಂಬಲವ ಹಾರೈಸುವವರಿಲ್ಲ
ಹೆಣ್ಣು ಮಗಳೆಂದು ಯಾಕೀ ಪಕ್ಷಪಾತ
ಆಗಲಾರೆನೇ ನಾ ಕಂಪು ಸೂಸುವ
ಪಾರಿಜಾತ?
ಅಂದುಕೊಳ್ಳಬೇಡಿ ನನ್ನನ್ನು ಬೇರೆಯವರ ಮನೆಗೆ ನೀಡುವ ದೇಣಿಗೆ
ಆಗಬಲ್ಲೆನಾತವರುಮನೆಯದೀವಿಗೆ.....
By Dr.Pooja S C

Comments