Belevanige
By Dr.Pooja S C
ಪುಟ್ಟ ಕಣ್ಣುಗಳು ರೆಪ್ಪೆ ತೆರೆದಿವೆ
ಕಾಣಲು ಇಂದೆಂದೂ ಕಾಣದ ಹೊಸ ಲೋಕವ
ಏನೂ ಅರಿಯದ ಜೀವವಿದು
ಶುರು ಮಾಡಿದೆ ಹೊಸ ಪಯಣವ
ಮಧುರ ತೊದಲು ನುಡಿಗಳಿವು
ಆಗದಿರಲಿ ಅನ್ಯರ ನೋವಿಸುವ ತೂಗುಗತ್ತಿ
ಕಿಲಕಿಲ ನಗುವಿದು ಆಗದಿರಲಿ
ಮುಖವಾಡದ ಹುಸಿನಗೆ
ಮುಗ್ಧತೆಯ ಮೊಗ್ಗು ಅರಳಿದೆ
ಬಾಡದಂತಾಗಲಿ ಸ್ವಾರ್ಥತೆಯ ಪ್ರದೂಷಣೆಗೆ ಸಿಲುಕಿ
ಪ್ರಶಾಂತವಾದ ಸಾಗರವಿದು
ಕದಡದಿರಲಿ ಚಿಂತೆಗಳ ಅಲೆಗಳಿಗೆ ಸಿಲುಕಿ.
ಚಿಕ್ಕ ಹೆಗಲುಗಳು ಆಗಲಿ
ಹೆತ್ತವರಿಗೆ ಆಸರೆ, ಕಲಹಗಳ ಮರೆತು
ಪುಟ್ಟ ಹೆಜ್ಜೆಗಳಿವು
ಮುಂದೊಂದುದಿನಆಗಲಿಸಾಧನೆಯಗುರುತು
By Dr.Pooja S C

Comments