Baragala
By Dr.Pooja S C
ಧಗ ಧಗ ಉರಿಯುವ ಬಿಸಿಲಿದು
ಬೆಂಕಿಯ ಉಗುಳುವ ಧಗೆ ಇದು
ಕಿತ್ತು ತಿನ್ನುತ್ತಿದೆ ಇದು ಹೊಲದ ಹಸಿರು
ಮಳೆ ಇಲ್ಲದೆ ನಿಂತಿದೆ ರೈತರ ಉಸಿರು
ಕಾದ ಹಂಚಾಗಿದೆ ನೆಲವು ಇಂದು
ಭೂಮಿ ಬಾಯಿಬಿಟ್ಟಿದೆ ಬೇಡಿ ನೀರಿನ ಬಿಂದು
ಪಶು ಪಕ್ಷಿಗಳು ಪರದಾಡುತ್ತಿವೆ ನೀರಿಲ್ಲವೆಂದು
ಬೆವರಿ ಬಸವಳಿದಿರುವೆವು ನಾವು ಬಿಸಿಲಲ್ಲಿ ಬೆಂದು
ಬಾರಯ್ಯ ಬಾ ಮಳೆರಾಯ
ಬಂದು ನೀ ಕೃಪೆ ತೋರಯ್ಯ
ಜಿನುಗಿ ನೀ ತಾ ಇಳೆಗೆ ತಂಪು
ಮತ್ತೆಕೇಳಲಿಹಕ್ಕಿಗಳಇಂಪು
By Dr.Pooja S C

Comments