Badatana
By Dr.Pooja S C
ಕಿತ್ತು ತಿನ್ನುವ ಬಡತನವಿದು, ಕಾಡಿದೆ ಬೆಂಬಿಡದೆ
ಮೃತ್ಯುಕೂಪವಿದು ಸೆಳೆದಿದೆ ತನ್ನೆಡೆಗೆ
ಮಮತೆಯ ಮಾಣಿಕ್ಯವಿಲ್ಲ
ಕಾರುಣ್ಯದ ಕವಿತೆಯಿಲ್ಲ
ಓದಿಸುವ ಔದಾರ್ಯವಿಲ್ಲ
ಸಲುಗೆಯ ಸಿಂಚನವಿಲ್ಲ
ಕಂಡರೂ ಕಾಣದಂತಿಹುದು ನಮ್ಮ ಲೋಕ
ನೋಡಿದರೂ ನೋಡದಂತಹ ಜನರ ಮಾಯಾಲೋಕ
ಯಾರ ಮೇಲೆಯೂ ತೋರಲಾರೆವು ನಮ್ಮ ಪ್ರಕೋಪ
ಬಡತನವೆಂಬುದು ನಮಗಂಟಿದ ಒಂದು ಶಾಪ
ಚಾಚಿ ತೋಳುಗಳ ನಿಂತಿಹೆವು ನಾವು
ಬೇಡಿ ಪ್ರೀತಿಯ ಅಪ್ಪುಗೆ ಕಾವು
ಕಾಣದೆ ನಿಮಗೆಲ್ಲಾ ನಮ್ಮೆಲ್ಲರ ನೋವು
ಸವೆದು ಸಾಕಾಗಿದೆ ನಮಗೆಲ್ಲ ಬರೀ ಕಹಿಯ ಬೇವು
ಆಗಿ ತಮದ ಮರಣ
ಬರಬೇಕಿದೆ ಒಂದು ಆಶಾಕಿರಣ
ಆಗಲು ಪ್ರಕಾಶದ ಅನಾವರಣ
ಕಟ್ಟಲುಆಸೆನಮಗೂತಳಿರುತೋರಣ...
By Dr.Pooja S C

Comments