Amma Neen Thane
By Akhilesh Telkar
ದೇವರು ಇಲ್ಲದ ಗುಡಿ ಇಲ್ಲ ತಾಯಿಲ್ಲದ ಮನೆ ಇಲ್ಲ
ನೋವಿಲ್ಲದ ಜೀವನ ಇಲ್ಲ ಅಮ್ಮಇಲ್ಲದ ಬಾಳು ಖುಷಿ ಇಲ್ಲ, ಆ ಖುಷಿ ನಿನ್ ತಾನೇ🙏
ನಾ ಬರುವೆ ಎಂದು ಗೊತ್ತಾಗಿದ್ದಾಗ ನೊವಲ್ಲಿ ಖುಷಿ ಕಂಡಿದ್ದು, ಅದು ನೀನ್ ತಾನೇ,
ನಾನು ಕಣ್ಣುಬಿಟ್ಟಾಗ, ಅತ್ತಾಗ, ಖುಷಿಯಲ್ಲಿ ಕಣ್ಣೀರು ಹಾಕಿದ್ದು ,ಅದು ನೀನ್ ತಾನೇ,
ಹಸಿವು ಇಲ್ಲದಿದ್ದರೂ ಇಷ್ಟ ಇಲ್ಲದಿದ್ದರೂ ನನಗೋಸ್ಕರ ಆಹಾರ ಸೇವಿಸಿದ್ದು, ಅದು ನೀನ್ ತಾನೇ,
ದೇಹದ ಆಕಾರ ದೇಹದ ಚಿಂತನೆ ಇದ್ದರೂನು ಎಲ್ಲಾ ಸಹಿಸಿ ನನ್ನ ಬೆಳವಣಿಗೆ ಬಗ್ಗೆ ಚಿಂತನೆ ಮಾಡುತ್ತಿದ್ದು,ಅದು ನೀನ್ ತಾನೇ,
ನಾ ಮಲಗಲಿ ಅಂತ ನೀ ಮಲಗದೆ ಇದ್ದಿದ್ದು,ಅದು ನೀನ್ ತಾನೇ,
ದಿನದ ಎಷ್ಟೇ ಪರಿಶ್ರಮ ಇರಲಿ ಎಷ್ಟೇ ದಣಿವು ಒಮ್ಮೆ ಅಮ್ಮ ಎಂದು ಕರೆದರೆ ಸಾಕು ಸದಾ ನನ್ನ ಬಳಿ ಚಿಕ್ಕ ಬೇಡಿಕೆಗೆ ಸದಾ ಸಿದ್ದ ಇರುವುದು,ಅದು ನೀನ್ ತಾನೇ,
ದೇವರು ಇಲ್ಲದ ಗುಡಿ ಇಲ್ಲ ತಾಯಿಲ್ಲದ ಮನೆ ಇಲ್ಲ
ನೋವಿಲ್ಲದ ಜೀವನ ಇಲ್ಲ ಅಮ್ಮಇಲ್ಲದ ಬಾಳು ಖುಷಿ ಇಲ್ಲ, ಆ ಖುಷಿ ನಿನ್ ತಾನೇ🙏
ಸದಾ ನಿನ್ನ ಚಿರಋಣಿ.
ಎ ಟಿ ಎಸ್
By Akhilesh Telkar

Comments