"Adrusthada Magu" - By Basavaraj Gadigeppagoudar
Written By: Basavaraj Gadigeppagoudar
Category: Poetry, in Kannada language
Competition: Poetry and Creative Writing Competition 2026
Basavaraj Gadigeppagoudar graces us with "Adrusthada Magu," a poignant piece of poetry written in the Kannada language. This submission is part of the esteemed Poetry and Creative Writing Competition 2026, showcasing the beauty and richness of cultural expression. Through vivid imagery and emotive language, Basavaraj invites readers into a world that celebrates the nuances of life and innocence.
About the Work
"Adrusthada Magu" beautifully captures the essence of childhood innocence and the wonder it brings. Through evocative descriptions, Basavaraj paints a picture that is both tender and vibrant. The poem's imagery, from the twinkling eyes to the delicate gestures of a child, creates a tapestry of emotions and reflections on life's pure moments. The literary style is deeply rooted in cultural nuances, enhancing its emotional depth and resonance.
"Adrusthada Magu" or "ಅದೃಷ್ಟದ ಮಗು" -
Original Submission by Basavaraj Gadigeppagoudar
ಅದೃಷ್ಟದ ಮಗು
---------------------------------------------------------------------
ಪುಟ್ಟ ಪುಟ್ಟ ಕೈಗಳು, ಕೆನ್ನೆ ಬೊಟ್ಟು ಬೋಕ ಗುಳಿಯು
ನಕ್ಷತ್ರ ಚುಕ್ಕಿ ಹಾಗೆ ಬೆಳ್ಳ ಬೆಳ್ಳನ ಬೆರಳು ಉಗುರು
ಮುಂಗೈ ಹಿಡಿದ ಮುಟುಕಿಯಲ್ಲಿ ಬ್ರಹ್ಮನ ಗಂಟು ನಂಟು
ಆಗೊಮ್ಮೆ ಈಗೊಮ್ಮೆ ಬೆರಳು ತೋರಿ ಅಳುವ ಆ ಸೊಗಸು….
ತೆರೆದ ಮುಷ್ಟಿಗಂಟಿನೊಳಗೆ ಹೆಪ್ಪುಗಟ್ಟಿದ ಕೆಂಪು ಬಣ್ಣ
ಬೆರಳ ಮಡಿಚಿ ಮುಂಗೈ ಹಿಚುಕಿ ಗುಮುಟಿ ಚಿವುಟಿ
ಅಗಲ ತೊಡೆಯು, ಬಾಳೆ ಗೊನೆಯು, ಮೇಲೆ ಕೆಳಗೆ ಅಲಗಿ
ಜೆಟ್ಟಿಯಂತೆ ಕಾಲು ತಟ್ಟಿ ಮೆತ್ತಗೆ ಒದೆವ ಗತ್ತು...
ಅಂಗಾಲು ಚಂದ ಹೊಳಪಲಿ ಹಿಂದೆ ಮುಂದೆ ಹಿಂದೆ
ಮೇಲೆ ಕೆಳಗೆ ಆಡಿಸಿದರೆ ಗೆಜ್ಜೆಯ ಗಿಲ ಗಿಲ ಪಂದ್ಯ
ಪಾದ ಪುಟಿಸಿ ಹಣೆಗೆ ಹಚ್ಚಿರೆ ಮೆತ್ತನೆಯ ದೇವ ದೃಷ್ಠಿ
ಹಿಡಿದು ಕೈಯ ಹೆಜ್ಜೆ ನಡೆಸಿರೆ ಅದೇ ಕೃಷ್ಣನ ಸೃಷ್ಟಿ …
ದುಂಡನೆ ಸೊಂಟ ತೊಗಟೆ ಗುಂಟ ಬೆಳ್ಳಿ ಉಡುದಾರ
ಪುಟ್ಟ ಆನೆಯ ಹೊರೆಯು, ತಿರುವು ಮುರುವು ನಡೆಯು
ಪಕ್ಕನೆ ನಕ್ಕರೆ ತೂಗುವ ಹೊಟ್ಟೆ ಹಿಂದೆ ಮುಂದೆ ಸರಿದು
ನಡೆವ ಬೆಡಗು ಜೋಲಿ ಹೊಡೆಯು ಬೀಳದ ತುಲನೆಯು...
ಮುಖದಲಿದೆ ಶುದ್ಧತೆಯ ಬಣ್ಣ ಶಾಂತತೆಯ ಬಿಳಿಯ ಮೇಳ
ಸಣ್ಣ ಮೂಗು, ಮಿಡಿವ ಬಾಯಿ, ಗುಲಾಬಿ ತುಟಿಯ ಹೋಳು
ಇಷ್ಟಗಲ ಕಣ್ಣು, ಕರ್ರನೆ ರೆಪ್ಪೆ, ಅದರಲ್ಲಿ ಮುಗ್ದ ಹೊಳಪು
ಪಿಳಿಕಿಸಿ ನಕ್ಕರೆ ಮುತ್ತಿನ ಮಳೆ ವಜ್ರದ ಮಿಂಚು ಬೆಳಕು…
ದುಂಡನೆ ಮುಖ ಹೊಳೆವ ಕಳೆ ಬಂಗಾರ ಸೆಳೆವ ಮೆಚ್ಚು
ಉಬ್ಬಿದ ಗಲ್ಲ ಸೊಬಗಿನ ಸೊಲ್ಲ ಕಡಿದರೆ ಕುಡಿಕೆ ಬೆಲ್ಲ
ಗದ್ದದ ಗುಮಟೆ ಸೋರುವ ಜೊಲ್ಲು ನಕ್ಕರೆ ಅದೇ ಸ್ವರ್ಗ
ನಿದ್ದೆಯ ನಗುವು ಕನಸಿನ ಸೆಳವು ದೇವರ ಜೊತೆಗೆ ಮಾತು…
ಮಲಗಿದ ಮಗು ತಟ್ಟನೆ ಎದ್ದು ತೆರೆದ ಅಗಲ ಕಣ್ಣು
ಪಿಚ್ಚಿನ ಹೊನ್ನು ಅತ್ತರೆ ಸುರಿವ ಮುತ್ತಿನ ಕಣ್ಣೀರ ಚೆನ್ನು
ಎಣ್ಣೆಯ ತಿಕ್ಕಿ ಸುಡು ನೀರ ಸುರಿವಿ ಬಟ್ಟೆಯಲಿ ಬೆಚ್ಚಗೆ ಸುತ್ತಿ
ತೊಟ್ಟಿಲ ತೂಗಿ ಮಲಗಿಸಿದರೆ ಅದೊಂದು ಸ್ವರ್ಗ ಸ್ತುತಿಯು…
--------------------------------------------------------------------------
ಬಸವರಾಜ ಗದಿಗೆಪ್ಪಗೌಡರ
ಬೆಂಗಳೂರು
About the Competition
The Poetry and Creative Writing Competition 2026 by Hashtag Kalakar is a prestigious platform celebrating diverse voices in literature. This competition invites participants from various backgrounds to share their unique stories and poetic expressions, fostering a global dialogue through the arts. It serves as a beacon for aspiring writers and poets to showcase their talent and creativity.
We extend our heartfelt appreciation to Basavaraj Gadigeppagoudar for sharing "Adrusthada Magu" with us. His contribution to the Poetry and Creative Writing Competition 2026 adds a rich dimension to the tapestry of voices represented. We are grateful for his participation and look forward to witnessing more of his literary journey.
About Hashtag Kalakar
Hashtag Kalakar is a creative platform dedicated to providing artists, writers, singers and other creative talents with opportunities to showcase their work and reach wider audiences through competitions, features and creative initiatives.



Comments