By Gowri Bhat
ಕಣ್ನೀ ಲ್ಲ ದ್ದಿದ್ದರೇನು ಕಿಟಕಿಗಳಾಗಿವೆ ನಮ್ಮ ಆತ್ಮವು
ಮನಸ್ಸಿನ ಕಣ್ಣಲ್ಲಿ ನೋಡುತ್ತಿರುವೆವು
ಪ್ರಕಾಶವಾದ ಭಾವನೆಗಳ ಬೆಳಕನ್ನು
ಜಗತ್ತಿನ ಪ್ರಕೃತಿಯ ಸೊಬಗನ್ನರಿತಿರುವೆವು
ಹೃದಯದಾಳದಿ ನಮ್ಮ ರಕ್ತದ ಕಣ ಕಣದಲ್ಲೂ !!
ಕಣ್ಣುಗಳು ಮನಸ್ಸನ್ನು ಆಕರ್ಷಿಸಿತು
ಮನದೊಳಗೆ ಆಸೆಯನ್ನು ಸೃಷ್ಟಿಸಿತು
ಪ್ರಪಂಚದ ಪಯಣ ಮಾಡಲೇತ್ನಿಸ್ಸಿತು
ಬಣ್ಣಬಣ್ಣದ ಲೋಕವೆಲ್ಲ ಕಾಮನಬಿಲ್ಲೇನಿಸಿತು
ಹೃದಯದಾಳದಿ ನಮ್ಮ ರಕ್ತದ ಕಣ ಕಣದಲ್ಲೂ !!
ಎಲ್ಲರ ಸವಾಲನ್ನು ಗೆದ್ದು ಬಂದಿರುವೆ
ಮನದಾಳದಿ ಸೃಷ್ಟಿಸಿಕೊಂಡಿರುವೆ
ಜೀವಕ್ಕೆ ಜೀವ ಕೊಟ್ಟು ರಕ್ಷಿಸಿ ಕಾಪಾಡುವೆ
ಬನ್ನಿ ಎಲ್ಲರೂ ಸೃಷ್ರಿಸೋಣ ನವ ಜೀವನವನ್ನ
ಹೃದಯದಾಳದಿ ನಮ್ಮ ರಕ್ತದ ಕಣ ಕಣದಲ್ಲೂ !!
By Gowri Bhat
Lovely
👏👏
Very beautiful
Very beautiful written.
Like.❤️
Very nicely written!