By Divya Viswanath
ಹುಟ್ಟು ಸಾವು
ಅದರ ಮಧ್ಯೆ ನಾವು
ಇಟ್ಟು ಬೊಗಸೆಯಷ್ಟು
ಕನಸು ಕಿಸೆಯಲಿ
ಆಗಸದ ಛಾವಣಿಯ ಕೆಳಗೆ
ಧರೆಯ ಹೆಸರಿನ ಹೊದಿಕೆ ಮೇಲೆ
ಪಯಣ ಸಾಗಿದೆ
ಸಾಧಿಸುವ ಛಲ ಮನಸಲಿ.
ತಕಡಿಯಲ್ಲಿ ತೂಗುವುದು ಈ ಸಮಾಜ.
ಯಾರ ಕನಸು ಹೇಗೆ ಎಂದು
ಬೆಲೆ ಕಟ್ಟಿ ಸಂತೆಯಲಿ ಅದರ ವ್ಯಾಪಾರ
ನೆರೆಹೊರೆಯರಿಗೆ ಹೋಲಿಸಿ
ತಿಳಿಸುವುದು ನನಗೆ ನನ್ನದೇ ಕನಸಿನ ಮೌಲ್ಯ
ಅಥವಾ ನಾನು ಕಂಡದ್ದು ಸ್ವಪ್ನವೇ ಅಲ್ಲ
ಅವರ ಪ್ರಕಾರ.
ನಾನು ಸ್ವಾವಲಂಬಿ , ಆತ್ಮಾಭಿಮಾನಿ
ಸಾಮಾನ್ಯವಾಗಿ ನನ್ನ ಪರಿಚಯ
ದುಡಿದು ತಂದರೆ ನಾನು ಸ್ವಾಭಿಮಾನಿ
ಎಂದು ಅವರ ಅಂಬೋಣ.
ನಾಣ್ಯದ ಸದ್ದಾದರೆ ಇರುವಿಕೆಗೆ ಬೆಲೆ
ಬುದ್ಧಿ ಕ್ಷಮತೆಯ ವಿಳಾಸ
ಕಾಂಚಣ ನಿಲಯ
ರೊಕ್ಕದ ಕೊಠಡಿ
ಹಣಕಾಸಿನ ಚರ್ಚೆಗೆ
ಹುರುಪಿನ ಸೇರ್ಪಡೆ
ಸಾಧಕರೊಡನೆ ಜೋಡಿ
ಇಲ್ಲವೇ ಎಲ್ಲರ ಮಧ್ಯವೂ ಏಕಾಂಗಿ
ಈ ಕಟ್ಟುಪಾಡಿನಿಂದ ಬೇಡವಾಗಿದೆ ಯಾರಿಗೂ ಬಿಡುಗಡೆ.
ಮುಗ್ಧ ವಾದ ಮುಕ್ತ ವಾದ ಖಾಸಗಿ ಕನಸಿಗೆ
ಇಂದು ಪ್ರಸಿದ್ಧಿಯ ಅಭಿಲಾಷೆ
ಪ್ರಾರಂಭ ಅದರತ್ತ ಚಲನೆ
ಗುರಿ ಮುಟ್ಟುವುದೋ ಅರ್ಧದಾರಿಯಲ್ಲಿ ಅಸು ನೀಗುವುದೋ
ಯಕ್ಷ ಪ್ರಶ್ನೆ.
ಹುಟ್ಟು ಸಾವು ಅದರ ನಡುವೆ ಯೆಷ್ಟೋ ವಿಶಯಗಳಡಗಿವೆ.
ಬರಿ ಹಣಕಾಸಿನ ಗಳಿಕೆಯಿಂದ ಮಾತ್ರವಲ್ಲ ನನ್ನ ಪರಿಚಯ
ನನ್ನ ನಿಷ್ಠೆ ,ನಿಲುವು,ಸ್ವಾತ್ಮಾರೋಪವು ನನ್ನ ಗರ್ವ ನನ್ನ ಕುರುಹುಗಳು
ನಾನು ಒಲ್ಲೆ ಅದೆ ಹುಟ್ಟು ಅದೆ ಸಾವು ಮಧ್ಯೆ ಬರಿ ರಿಕ್ತ ನಿರರ್ಥಕ.ವಿತ್ತವು.
By Divya Viswanath
Comments