ಸಂಸಾರ ಭಾರ
- Hashtag Kalakar
- Sep 11, 2025
- 1 min read
By Sahana Joshi
ಸಖಿ ನೀನಿದ್ದರೆ ನನ್ನ ಜೊತೆಗೂಡಿ |
ಧೈರ್ಯವಿರುವುದು ನನಗೆ ಎದುರಿಸಲು ಜಗವಿಡಿ||
ಈ ಜೀವನದ ಬಂಡಿಯನ್ನು ನಡಿಸಲು ಇರುವುದು ನನಗೆ ಇಷ್ಟೇ ತಾಕ್ಕತ್ತು |
ಶ್ರಮ ಪಟ್ಟು ಬೆವರು ಸುರಿಸಿ ಊಣಬಡಿಸುವೆ ನಿನಗೆ ಮೂರು ಹೊತ್ತು||
ನನ್ನ ಸಂಪತ್ತು ನಿನ್ನ ಪ್ರೀತಿಯೆ ಓ ಗೆಳೆಯ|
ನಿನ್ನ ಜೊತೆ ಬಾಳುವುದೇ ನನ್ನ ಅದೃಷ್ಟ ನನ್ನೊಡೆಯ||
ಈ ಮಣ್ಣಿನ ಕೆಂಪು ಬಣ್ಣದಷ್ಟು ಗಾಢವಾಗಿದೆ ನಮ್ಮ ಪ್ರೀತಿ|
ಸುಃಖದಲ್ಲೂ ಕಷ್ಟದಲ್ಲೂ ಜೀವನ ಸಾಗಿಸುವೆವು ಒಂದೆ ರೀತಿ||
ಏಕೆ ಹೊರುವೆ ನೀನೊಬ್ಬನೆ ಸಾಂಸಾರದ ಭಾರವನ್ನು|
ಇರುವೆನು ನಿನ್ನೊಡನೆ ಕೊಡುತಾ ಹೆಗಲಿಗೆ ಹೆಗಲನ್ನು||
By Sahana Joshi

Comments