ಸೀರೆಯ ಸೊಬಗು
- Hashtag Kalakar
- Sep 11
- 1 min read
By Sahana Joshi
ನಾರಿ ನೀ ಉಟ್ಟಾಗ ಬಣ್ಣ ಬಣ್ಣದ ಸೀರೆಯನ್ನು|
ಹೆಚ್ಚಿಸುವುದು ಅದು ನಿನ್ನ ಸೌಂದರ್ಯ , ಅಂದವನ್ನು||
ಹಬ್ಬಗಳಲ್ಲಿ ಸೀರೆ ಉಡುವುದು ಒಂದು ಸಂಭ್ರಮದ ಸಂಗತಿ|
ಈ ಉಡುಪಿಗೆ ಮೇರಗು ಕೊಡುವುದು ವಜ್ರದ ಮೂಗುತಿ ||
ಸೀರೆ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ |
ಇಷ್ಟ ಪಟ್ಟು ಅಚ್ಚುಕಟ್ಟಾಗಿ ತೊಡುವ ಮಹಿಳೆಯರು ಬಹುತೇಕ ||
ಮೈಸೂರ ಸೀರೆ, ಬನಾರಸಿ ಸೀರೆ , ಇಳಕಲ ಸೀರೆ , ಕಂಚಿ ಸೀರೆ|
ಬಗೆ ಬಗೆಯ ಸೀರೆಯಲ್ಲಿ ನಿನ್ನ ಅಂದ ಬೇರೆ ಬೇರೆ||
ನಿನ್ನ ಸೌಂದರ್ಯ ಹೆಚ್ಚುವುದು ಹಾಕಿದಾಗ ಸೀರೆ ಜೊತೆ ಜುಮುಕಿ |
ಲಕ್ಷಣವಾಗಿ ಕಾಣೋ ನಿನ್ನ ನೋಡಿ ಬಿದ್ದೆ ನಾ ಧುಮುಕಿ |
ನೀನು ಇಷ್ಟ ಪಟ್ಟ ಸೀರೆ ಇರಲಿ ಎಷ್ಟೆ ದುಬಾರಿ|
ಕೊಂಡು ಅದನ್ನ ಊಟ್ಟು ಮೇರೆಯುವೆ ನೀನು ಒಂದೆ ಬಾರಿ ||
ನಿನ್ನ ಬಟ್ಟೆ ಬೀರು ದಲ್ಲಿ ಇದ್ದರೂ ನೂರಾರು ಸೀರೆ|
ಮತ್ತೆ ಪ್ರತಿ ಸಮಾರಂಭಕ್ಕೂ ಕೇಳುವೆ “ಖರೀದಿಸಲೆ ಒಂದು ಹೊಸ ಸೀರೆ”||
By Sahana Joshi

Comments