By Divya Viswanath
ಯಾರ ತಂಟೆ ಯಾರ ಹಂಗು
ಬೇಡವೇ ಬೇಡ ನನಗು ನಿನಗೂ
ದಾಕ್ಷಿಣ್ಯ ತುಂಬಿದ ಕೋಟೆಗಿಂತ ಆತ್ಮಾಭಿಮಾನದ ಮನ ಮಂದಿರವೇ ಲೇಸು.
ನಿಜವಾದ ಸಂಪಾದನೆ ಜನ ಗಳಿಕೆ ಅನ್ನುವರು
ಆ ಜನ ಈ ಜನ ಎಂತಹ ಜನ ಯಾರು ಹೇಳುವವರು
ಇರುವಾಗ ಬರದವರು ಹೋದಮೇಲಿನ್ನೇಕೆ
ಅವರ ಪಾಡಿಗವರಿರಲಿ ನನಗೆ ನನ್ನ ಪಾಡು
ಅದಕೆ ಈ ಹಾಡು
ಬಲವಂತದ ನೆಂಟಸ್ತಿಕೆಯಲ್ಲಿ ಯಾರಿಗೂ ಹಿತವಿಲ್ಲ
ನನ್ನೊಟ್ಟಿಗೆ ನಾನು, ಟೀಕೆ ಟಿಪ್ಪಣಿಗಳಿಂದ ಬಹು ದೂರ ಬಂದಿರುವೆ
ಹಾಡುತ ಬರೆಯುತ, ನನ್ನ ಕಂದನ ಜೊತೆ ನಾನೂ ಬೆಳೆದಿರುವೆ
ನನಗೆ ಬೇಕಾದ ವೇಗದಲಿ, ಮೌಲ್ಯಗಳ ಪಥದಲ್ಲಿ
ನಿರ್ಭಯದಿಂದ ಕಿರು ಹೆಜ್ಜೆ ಹಾಕುತಿರುವೆ
ಛೀಮಾರಿಯ ಚಿಂತೆ ಇಲ್ಲ ಜಯಕಾರದ ಆಶಯವಿಲ್ಲ
ನಾನು ಶ್ರಮದಿಂದ ಕೆತ್ತಿರುವ ದಾರಿಯಲಿ
ಹೆಮ್ಮೆಯಿಂದ ಸಾಗುತಲಿರುವೆ
ಎಲ್ಲೊ ಹೀಗೆ ಎಲೆ ಮರೆಕಾಯಾಗಿ
ಕಾಯಕವೇ ಕೈಲಾಸವಾಗಿ
ಜೀವಿಸುತ್ತಿರುವುದು
ಅಭ್ಯಾಸವಾಗಿದೆ ನೋಡು
ಅದಕೆ ಈ ಹಾಡು.
By Divya Viswanath
Kommentare