ಯೋಗ ಕ್ಷೇಮ
- Hashtag Kalakar
- Sep 11
- 1 min read
By Sahana Joshi
ಆಧ್ಯಾತ್ಮಿಕ ಚೈತನ್ಯವನ್ನು ಯೋಗ ಸೂತ್ರಗಳಲ್ಲಿ ಬಣ್ಣಿಸಿದವರು ಪತಂಜಲಿ ।
ವಿಷ್ಣು ವಿಶ್ರಾಂತಿ ಪಡೆಯುವ ಆದಿಶೇಷನ ಅವತಾರ ಪತಂಜಲಿ ॥
ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ದೇಹಕ್ಕೆ ಸ್ಪೂರ್ತಿಯನ್ನು ತುಂಬುವುದು ಸೂರ್ಯ ನಮಸ್ಕಾರ ।
ಅತ್ಯಂತ ಶಕ್ತಿಶಾಲಿಯಾಗಿದ್ದು ವಿಶೇಷವಾಗಿ ಸ್ತ್ರೀ ಶಕ್ತಿಯನ್ನು ಹೆಚ್ಚಿಸುವುದು ಚಂದ್ರ ನಮಸ್ಕಾರ॥
ಉಸಿರಾಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಮಾಡುವ ತಂತ್ರ ಪ್ರಾಣಾಯಾಮ ।
ದಿನನಿತ್ಯ ಮಾಡಿದರೆ ಪ್ರಾಣಾಯಾಮ ಕಾಣಬಹುದು ಅದರ ಒಳ್ಳೆಯ ಪರಿಣಾಮ ॥
ದೇಹ ಮತ್ತು ಮನಸ್ಸಿನ ಶಕ್ತಿಯ ಹರಿವನ್ನು ಸುಗಮಗೊಳಿಸುವದು ಕೈ ಸನ್ನೆ ಗಳಾದ ಮುದ್ರಗಳು।
ನಮ್ಮ ಆಂತರಿಕ ಆತ್ಮಗಳೊಂದಿಗೆ ಸಂಪರ್ಕ ಸಾಧಿಸಲು ನಮಗೆ ವಿಶೇಷ ಮಾರ್ಗವನ್ನು ನೀಡುವುದು ಈ ಕೈ ಚಲನೆಗಳು ॥
ಒಂದು ಆಸನದಿಂದ ಇನ್ನೊಂದು ಆಸನಕ್ಕೆ ಹರಿಯುವ ವಿಧಾನವೇ ವಿನ್ಯಾಸ ಯೋಗ।
ಉಸಿರಾಟದ ಕಡೆಗೂ ಗಮನ ನೀಡಿ ಹೃದಯದ ರಕ್ತನಾಳಗಳು ಸದೃಢಗೊಳ್ಳುವವು ವಿನ್ಯಾಸ ಮಾಡುವಾಗ॥
ಐದು ಇಂದ್ರಿಯಗಳು ಮತ್ತು ಮನಸ್ಸಿನ ಹಸ್ತಕ್ಷೇಪವಿಲ್ಲದೆ ಮಾಡುವ ಹಠಮಾರಿ ಅಭ್ಯಾಸ ಹಠ ಯೋಗ।
ನಿಯಮಿತವಾಗಿ ಮಾಡಿ ಯೋಗ ಪಡೆದುಕೊಳ್ಳಿರಿ ಅದರ ಉಪಯೋಗ॥
ಯೋಗದಿಂದ ಸದೃಢ ಆರೋಗ್ಯವನ್ನು ಪಡೆದುಕೊಂಡು ದೂರವಿಡಿರಿ ರೋಗ।
ಔಷಧಕ್ಕೆ ಪರ್ಯಾಯವಾಗಿ ಕೆಲಸ ಮಾಡುವುದು ದಿನ ನಿತ್ಯ ಮಾಡಿದರೆ ಯೋಗ ॥
By Sahana Joshi

Comments