By Gurusiddeshwar M Badiger
ಆಸೆಯ ಮಿತಿಯಿರದ ಓ ಜೀವವೇ
ಗತಿಗೆಡಿಸಿ ಕಂಗೆಡಿಸೊ ಕೆಂಪಿರುವೆಯೆ
ನಗುಬರದೆ ಅಳುವಿರದೆ ಕುಳಿತಿದ್ದರೂ
ಸಜೆ ನೀಡಿ ಮಜ ನೋಡಿ
ಕುಣಿ ನೀ ಕುಣಿ ನೀ ಕುಣಿ ಎನ್ನುವೆ
ಹೆತ್ತವರ ಮಡಿಲಲ್ಲಿ ಹೊತ್ತವರ ಹೆಗಲಲ್ಲಿ
ಕಂಡವರ ಬಾಯಲ್ಲಿ ಕುಣಿದಾಡುವೆ
ಕುಣಿ ನೀ ಕುಣಿ ನೀ ಕುಣಿ ಎನ್ನುವೆ
ಕಬ್ಬಿನ ರಸದಂತೆ ದೇಹವ ಹಿಂಡಿ
ಸಂಬಂಧ ಅಳಿಸಿ ವಸ್ತ್ರವ ಕಳಚಿ
ನಡಿ ನೀ ನಡಿ ನೀ ನಡಿ ಎನ್ನುವೆ
ಹಿಂದಿನ ಯಾತ್ರೆಯ ಮುಂದಿನ ಜಾತ್ರೆಯ
ನೆನೆನೆನಸಿ ಹರಸಿ ಕಣ್ಣೀರ ಸುರಿಸಿ
ನಡಿ ನೀ ನಡಿ ನೀ ನಡಿ ಎನ್ನುವೆ
ನಂಟನ್ನು ಬಿಡದ ದೇಹವ ಅಂಟದ
ಹಿಡಿ ಮಣ್ಣೀಗೂ ಸಲ್ಲದ
ಎನ ಜೀವವೆ.
By Gurusiddeshwar M Badiger
Comments