top of page

ಗಣರಾಜ್ಯೋತ್ಸವ

By Gurusiddeshwar M Badiger


ಕಂಬನಿ ಒರೆಸುವ ನಾಯಕ

ದೀನರ ಕಾಯುವ ಸೈನಿಕ

ಪ್ರಜೆಗಳ ನೆಚ್ಚಿನ ಸೇವಕ

ಸಂವಿಧಾನ ರಚನಾತ್ಮಕನಿಗೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ


ನೊಂದ ಮನಸಿನ ಉಳಿವಿಗೆ

ಬೆಂದ ಕನಸಿನ ಸ್ಪೂರ್ತಿಗೆ

ಗೆಲುವನೆ ಕಾಣದ ಕೈಗಳಿಗೆ

ಭರವಸೆ ನೀರು ಉಣಿಸಿದ ದಿನಕೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ


ರಕುತದ ಓಕುಳಿ ಹರಿಸುತ

ವೈರಿ ಪಡೆಯು ಬೆದರುತ

ನಾಡಲಿ ಮೀಸೆಯ ತಿರುವುತ

ಈ ದಿನ ಮಡಿದ ರಾಯಣ್ಣನಿಗೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ



ಜನರಿಗೆ ಹಕ್ಕು ಮೀಸಲಿರುತ

ಸಂಯಮ ಮೀರದೆ ಬೀಗುತ

ಶಾಂತಿ ಮಂತ್ರವ ಭಜಿಸುತಿಹ

ಭಾರತ ದೇಶದ ಸಂವಿಧಾನಕೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ.



ಕಂಬನಿ ಒರೆಸುವ ನಾಯಕ

ದೀನರ ಕಾಯುವ ಸೈನಿಕ

ಪ್ರಜೆಗಳ ನೆಚ್ಚಿನ ಸೇವಕ

ಸಂವಿಧಾನ ರಚನಾತ್ಮಕನಿಗೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ


ನೊಂದ ಮನಸಿನ ಉಳಿವಿಗೆ

ಬೆಂದ ಕನಸಿನ ಸ್ಪೂರ್ತಿಗೆ

ಗೆಲುವನೆ ಕಾಣದ ಕೈಗಳಿಗೆ

ಭರವಸೆ ನೀರು ಉಣಿಸಿದ ದಿನಕೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ


ರಕುತದ ಓಕುಳಿ ಹರಿಸುತ

ವೈರಿ ಪಡೆಯು ಬೆದರುತ

ನಾಡಲಿ ಮೀಸೆಯ ತಿರುವುತ

ಈ ದಿನ ಮಡಿದ ರಾಯಣ್ಣನಿಗೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ


ಜನರಿಗೆ ಹಕ್ಕು ಮೀಸಲಿರುತ

ಸಂಯಮ ಮೀರದೆ ಬೀಗುತ

ಶಾಂತಿ ಮಂತ್ರವ ಭಜಿಸುತಿಹ

ಭಾರತ ದೇಶದ ಸಂವಿಧಾನಕೆ

ಉತ್ಸವ ಉತ್ಸವ ಉತ್ಸವ ಈ ದಿನ ಗಣರಾಜ್ಯೋತ್ಸವ.


By Gurusiddeshwar M Badiger



Comments

Rated 0 out of 5 stars.
No ratings yet

Add a rating
SIGN UP AND STAY UPDATED!

Thanks for submitting!

  • Grey Twitter Icon
  • Grey LinkedIn Icon
  • Grey Facebook Icon

© 2024 by Hashtag Kalakar

bottom of page